ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಕಾರವಾರದ ಕೋಡಿಭಾಗದ ಸಾಯಿಕಟ್ಟಾದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ 12ರ ಸುಮಾರು ಸಂಭವಿಸಿದೆ. ನಗರದ ಕೋಡಿಭಾಗದ ಸಾಯಿಕಟ್ಟಾ ಪ್ರದೇಶದಲ್ಲಿ ವಾಸಿಸುತ್ತಿರುವ ವೃದ್ಧೆ ವಿಜಯಾ ಪಾಲೇಕರ್ ಅವರ ಮನೆಯ ಗೋಡೆಯು ಮಳೆಯ ರಭಸಕ್ಕೆ ಕುಸಿದಿದೆ. ವಿಜಯಾ ಅವರು ಬಾತ್‌ರೂಂಗೆ ಬಟ್ಟೆ ಇಡಲು ಹೋದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಹಳೆಯ ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಲಾಗಿದ್ದ ಬಾತ್‌ರೂಂನ ಗೋಡೆಯು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.