ಶ್ರಾವಣ ಶನಿವಾರ ಹಿನ್ನೆಲೆ ತುಮಕೂರಿನ ಶೆಟ್ಟಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. ಆಂಜನೇಯನಿಗೆ ವಿಳ್ಳೆದೆಲೆ ಹಾಗೂ ಹೂವಿನ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವರ ದರ್ಶನ ಪಡೆದ ಭಕ್ತರು ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ತರುವಾಯ ಸಹಸ್ರಾರು ಜನರು ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗಿಯಾದರು . ಮಧ್ಯಾಹ್ನ 2.30 ರ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ದಾಸೋಹದಲ್ಲಿ ಭಾಗಿಯಾಗಿದ್ದು ಕಂಡು ಬಂತು.ರಾಜ್ಯದ ಎಲ್ಲೆಡೆಯಿಂದ ಭಕ್ತಾಧಿಗಳು ಈ ಅಂಜನೇಯ ದರ್ಶನಕ್ಕೆ ಆಗಮಿಸುತ್ತಾರೆ. ಮುಜುರಾಯಿ ಒಡೆತನದಲ್ಲಿರುವ ಬಿ ದರ್ಜೆಯ ದೇವಾಲಯ ಎಂದು ದಾಖಲೆಯಲ್ಲಿದ್ದರು. ಎ ದರ್ಜೆಯ ವರಮಾನ ಈ ದೇವಾಲಯದಿಂದ ಲಭಿಸುತ್ತಿದೆ.