*ಅಶೋಕ ಶಿಲಾಶಾಸನದ ಬಳಿ ನಾಯಿಯನ್ನು ಬೇಟೆಯಾಡಿದ ಚಿರತೆಯ ದೃಶ್ಯ ವೈರಲ್* ಮೊಳಕಾಲ್ಮುರು:-ಐತಿಹಾಸಕ ಪ್ರಸಿದ್ಧವಾದ ಅಶೋಕ ಶಿಲಾಶಾಸನದಲ್ಲಿ ಹಗಲೊತ್ತಿನಲ್ಲಿಯೇ ಚಿರತೆಯು ಸಾಕು ನಾಯಿಯನ್ನು ಬೇಟೆಯಾಡಿದೆ. ಈ ಚಿರತೆಯು ಆಗಾಗ್ಗೆ ಬ್ರಹ್ಮಗಿರಿ ಬೆಟ್ಟ,ಕಾಡು ಸಿದ್ದಾಪುರ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದು ಕುರಿ,ಮೇಕೆಗಳು ನಾಯಿಗಳನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತ ದೃಶ್ಯಗಳನ್ನು ಸ್ಥಳೀಯರು ಸಾಕಷ್ಟು ಬಾರಿ ಕಂಡಿದ್ದಾರೆ.