ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ಮದ್ದೂರು ತಾಲೂಕಿನ ಕಾರ್ಕಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮದ್ದೂರು ತಾಲೂಕಿನ ಸಿಎಂ ಕೆರೆ ಹೋಬಳಿಯ ಕಾರ್ಕಳ್ಳಿ ಗ್ರಾಮದ ರವಿಕುಮಾರ್ (40) ಎಂಬ ದುರ್ದೈವಿಯಾಗಿದ್ದಾನೆ. ಗೌರಿ - ಗಣೇಶ ಹಬ್ಬದ ಅಂಗವಾಗಿ ಕಾರ್ಕಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ವಿಸರ್ಜನೆ ಅಂಗವಾಗಿ ಸೋಮವಾರ ಸಂಜೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಕೂಡ ನಡೆಸಲಾಗಿತ್ತು. ರಾತ್ರಿ 11 ಗಂಟೆ ವೇಳೆಗೆ ಕ್ಯಾತಘಟ್ಟ ಗ್ರಾಮದ ಬಳಿಯ ಹೆಬ್ಬಾಳ ನಾಲೆಗೆ ವಿಸರ್ಜನೆ ಮಾಡಲು 20 ರಿಂದ 30 ಜನ ಆಗಮಿಸಿ ಪೂಜೆ ಸಲ್ಲಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನೀರಿಗೆ ಇಳಿದಿದ್ದಾರೆ.