ಪಾಕಿಸ್ತಾನ ಮೂಲದ ಮೆಹದಿ ಫೌಂಡೇಶನ್ ಇಂಟರ್ನ್ಯಾಷನಲ್ ಸಂಘಟನೆ ತತ್ವವನ್ನು ತುಮಕೂರಿನ ಮುಸ್ಲಿಂ ಸಮುದಾಯದಲ್ಲಿ ಪ್ರಚಾರ ಮಾಡುತ್ತಿರುವ ಸಂಘಟನೆ ಸಕ್ರಿಯ ಸದಸ್ಯೆ ಇಶ್ರತ್ ಎಂಬ ಮಹಿಳೆ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಜರುಗಿಸುವಂತೆ ಮುಸ್ಲಿಂ ಮುಖಂಡರು ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿದರು. ಸೋಮವಾರ ಮಧ್ಯಾಹ್ನ 12 ರ ಸಮಯದಲ್ಲಿ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ ತುಮಕೂರು ನಗರದ ನೂರಾನಿ ಮಸೀದಿ ಅಧ್ಯಕ್ಷ ಜಾಹಿದ್ ಖಾನ್ ಶೀರಾನಿ ಹಾಗೂ ಮರ್ಕಜಿ ಮಜಲಿಸೆ ಮುಶಾವರತ್ ಸದಸ್ಯರು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ಆಡಿಷನ್ ಎಸ್ಪಿ ಯಾವರಾದ ಗೋಪಾಲ್ ಹಾಗೂ ಪುರುಷೋತ್ತಮ್ ಅವರುಗಳಿಗೆ ಮನವಿ ಪತ್ರ ಸಲ್ಲಿಸಿದರು.