ಬಾನು ಮುಸ್ತಾಕ್ ರಿಂದ ದಸರಾ ಉದ್ಘಾಟನೆಗೆ ವಿರೋಧ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಬಂಗಾರಪೇಟೆ ನಾರಾಯಣ ಸ್ವಾಮಿ ಅವರು, ಭಾರತದಲ್ಲಿ ನಾವೆಲ್ಲರೂ ಒಟ್ಟಿಗೆ ಹುಟ್ಟಿದ್ದೇವೆ, ಬೆಳೆದಿದ್ದೇವೆ. ಉದಾಹರಣೆಗೆ ಗ್ರಾಮದಲ್ಲಿ ಬಾಬಯ್ಯನ ಹಬ್ಬ ಮಾಡ್ತಾರೆ. ಆಗ ಹಿಂದೂ ಮುಸ್ಲಿಂ ಇಬ್ಬರೂ ಭಾಗವಹಿಸುತ್ತಾರೆ ಅಲ್ವಾ? ನನ್ನ ಕ್ಷೇತ್ರದಲ್ಲಿಯೂ ಕೂಡ ಹಿಂದೂಗಳ ಹಬ್ಬದಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆ. ಬೇರೆ ಜಾತ್ರೆ ಕಾರ್ಯಕ್ರಮದಲ್ಲಿ ಮುಸ್ಲಿಂ ಭಾಂಧವರು ಭಾಗವಹಿಸುತ್ತಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಒಂದಾಗಿ ಬೆಳೆದುಕೊಂಡು ಬಂದಿದ್ದಾರೆ. ಈಗ ರಾಜಕೀಯವಾಗಿ ಕೆಲವರು ಜಾತಿಯನ್ನು ಬಳಸಿಕೊಳ್ತಿದ್ದಾರೆ, ಇದು ಸರಿಯಲ್ಲ ಎಂದರು.