ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಅನ್ನದಾನೇಶ್ವರ ಜಾತ್ರೆಯ ನಿಮಿತ್ತ ಪಂಚಕಳಸ ಮಹಾರಥೋತ್ಸವ ಇಂದು ನಡೆಯಿತು. ಆಗಸ್ಟ್ 22 ರಂದು ಸಂಜೆ 6-00 ಗಂಟೆಗೆ ಮುಂಡರಗಿಯ ಅನ್ನದಾನೇಶ್ವರ ಮಠದ ಪೀಠಾದಿಪತಿಗಳಾದ ಮುಂಡರಗಿ ಅನ್ನದಾನೇಶ್ವರ ಸ್ವಾಮಿಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಕುಕನೂರು ಪಟ್ಟಣದ ರಥ ಬೀದಿಯಲ್ಲಿ ಭಕ್ತರು ರಥೋತ್ಸವ ದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ ಬಾಳೆ ಹಣ್ಣು ಎಸೆಯುವ ಮೂಲಕ ಹರಕೆ ಸಮರ್ಪಣೆ ಮಾಡಿ ದರು