ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದಿಂದ ಯಾದಗಿರಿ ತಾಲೂಕಿನ ಅಬ್ಬೆ ತುಮಕೂರ ಗ್ರಾಮದ ಶ್ರೀ ವಿಶ್ವರಾಧ್ಯರ ಮಠಕ್ಕೆ ಶ್ರೀ ಪ್ರಭುಲಿಂಗೇಶ್ವರ ಭಜನಾ ಮಂಡಳಿಯ ಭಕ್ತಾದಿಗಳಿಂದ 28ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಶುಕ್ರವಾರ ಮಧ್ಯಾನ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು, ಈ ಸಂದರ್ಭದಲ್ಲಿ ಅನೇಕ ಮುಖಂಡರು ಭಾಗವಹಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಮಹಿಳೆಯರು ಯುವಕರು ಸೇರಿದಂತೆ 3 ನೂರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.