ಜುಮಲಾಪುರ ತಾಂಡದ ಪುರ ನಾಯಕ ದೊಡ್ಡಿಯಲ್ಲಿ ಅದ್ದೂರಿಯಾಗಿ ಸಸಿ ಹಬ್ಬ ಆಚರಣೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜುಮಲಾಪುರ ತಾಂಡದ ಪುರ ನಾಯಕ ದೊಡ್ಡಿಯಲ್ಲಿ ಅದ್ದೂರಿಯಾಗಿ ಸಸಿ ಹಬ್ಬ ಆಚರಣೆ ಮಾಡಲಾಯಿತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪುರ ನಾಯಕ ದೊಡ್ಡಿಯ ಪ್ರತಿ ಮನೆಯಲ್ಲಿ ಹತ್ತು ದಿನಗಳವರೆಗೂ ಬತ್ತಗಳನ್ನು ಹಾಕಿ ಸಸಿಗಳನ್ನು ಬೆಳೆಸಿ ಹತ್ತನೆಯ ದಿನವು ಅದ್ದೂರಿಯಾಗಿ ಗ್ರಾಮದ ಪ್ರತಿ ಪ್ರತಿ ಮನೆಯಲ್ಲಿ ಹಾಕಿರುವಂತ ಸಸಿಗಳನ್ನು ತೆಗೆದುಕೊಂಡು ಬಂದು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಕೃಷ್ಣ ನದಿಗೆ ಸಸಿಗಳನ್ನು ಹಾಕಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಸಸಿ ಹಬ್ಬದಲ್ಲಿ ಭಾಗವಹಿಸಿದ್ದರು