ಇದು ಹಿಂದೂ ದೇಶ, ಡಿಜೆ ಬ್ಯಾನ್ ಮಾಡಿದರೆ ಕೇಳಲ್ಲ: ನಗರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಅಬ್ಬರ ಇದು ಹಿಂದೂ ದೇಶ, ಗಣೇಶ ಹಬ್ಬಕ್ಕೆ ಡಿಜೆ ಬ್ಯಾನ್ ಮಾಡಿದರೆ ಕೇಳಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅಬ್ಬರಿಸಿದ್ದಾರೆ. ದಾವಣಗೆರೆ ನಗರದಲ್ಲಿ ಡಿಜೆ ಬ್ಯಾನ್ ಸಂಬಂಧ ಶನಿವಾರ ಸಂಜೆ 5 ಗಂಟೆಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಪೊಲೀಸರ ನಿಯಮಗಳನ್ನು ನಾವು ಒಪ್ಪುವಂತೆ ಇರಬೇಕು. ನಮ್ಮ ತಲೆಯ ಮೇಲೆ ನಿಯಮಗಳನ್ನು ಏರಬಾರದು. ಇದು ಹಿಂದೂ ದೇಶ ಡಿಜೆ ಬ್ಯಾನ್ ಮಾಡಿದರೆ ಕೇಳಲ್ಲ ಎಂದು ಅಬ್ಬರಿಸಿದ್ದಾರೆ