ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳು ಮೃತಪಡುತ್ತಿರುವ ಸಂಬಂಧ ತಾಲೂಕು ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಡಾ.ಸಿದ್ದರಾಜು ಶುಕ್ರವಾರ ಮಾಹಿತಿ ನೀಡಿದ್ದು, ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತ ಮೂರು ಕರುಗಳ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದರು. ಪಶುಸಂಗೋಪನೆ ಇಲಾಖೆ ವತಿಯಿಂದ ರೈತ ಮುನಿಸಿದ್ದ ಅವರಿಗೆ ಪ್ರತಿ ಜಾನುವಾರುಗೆ 15 ಸಾವಿರ ರೂಪಾಯಿಯಂತೆ ಪರಿಹರ ನೀಡಲಾಗುವುದು ಜಾನುವಾರುಗಳ ಸಾವಿಗೆ ನಿಖರ ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಕಳಿಸಿರುವ ವರದಿ ಬರಬೇಕು ಎಂದರು.