ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪ ಇರುವ ಪೇಟೇ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಗ್ಗ ಜಗ್ಗಾಟವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಎಂಟು ತಂಡಗಳು ಹಗ್ಗ ಜಗ್ಗಟಾದಲ್ಲಿ ಭಾಗವಹಿದ್ದವು ಪೊಲೀಸ್ ಇಲಾಖೆ ತಂಡ ಹಾಗೂ ವಿಎಚ್ ಪಿ ತಂಡಗಳು ಫೈನಲ್ ನಲ್ಲಿ ಸೆಣಸಡಿಸದವು. ಕೊನೆಗೆ ಪೊಲೀಸ್ ಇಲಾಖೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.