ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಅಕ್ಕೂರು ಪೊಲೀಸರು ದಾಳಿ ಮಾಡಿದ್ದಾರೆ. ನೆರಳೂರು ಗ್ರಾಮದಲ್ಲಿ 8 ಮಂದಿ ಹಣವನ್ನು ಪಟವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಕ್ಕೂರು ಪೊಲೀಸ್ ಠಾಣೆ ಸಿಬ್ಬಂದಿಗಳು ದಾಳಿ ಮಾಡಿ ಜೂಜಾಟ ಆಡುತ್ತಿದ್ದ 8 ಮಂದಿ ಹಾಗೂ ಪಣವಾಗಿಟ್ಟಿದ್ದ 15.070 ರೂ.ಗಳನ್ನ ವಶಕ್ಕೆ ಪಡೆದು ಶನಿವಾರ ಪ್ರಕರಣ ದಾಖಲು ಮಾಡಿದ್ದಾರೆ.