ಮದ್ದೂರು ಗಲಾಟೆ ವಿಚಾರ, ಹಾಗೂ ಸಿಟಿ ರವಿ ಬಳಿಕ ಯತ್ನಾಳ್ ಮೇಲೂ ಎಫ್ಐಆರ್ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು, ರಾಜಕೀಯ ಮಾಡಬೇಡಿ ಅಂತ ನಾವು ಮೊದಲಿಂದಲೂ ಹೇಳ್ತಿದೀವಿ. ಪೊಲೀಸರು ಯಾರೇ ಕಾನೂನು ವಿರುದ್ಧ ನಡೆದುಕೊಂಡ್ರೂ ಕ್ರಮ ತಗೋತಾರೆ. ಮುಸ್ಲಿಮ್ ಆಗಿರಲಿ ಹಿಂದೂ ಆಗಿರಲಿ ಕಲ್ಲೆಸೆದರೆ ಪೊಲೀಸರು ಕ್ರಮತಗೋತಾರೆ. ಅದನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಆದ್ರೆ ಬಿಜೆಪಿಯವ್ರು ಅಲ್ಲಿಗೆ ಹೋಗಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಮತ್ತೆ ಜನರನ್ನು ಎಬ್ಬಿಸಿದ್ದಾರೆ, ಇದು ಸರಿಯಲ್ಲ, ವೀರಾವೇಶದಲ್ಲಿ ಮಾತಾಡಿದ್ದಾರೆ, ಬಳಸಬಾರದ ಪದಗಳನ್ನು ಬಿಜೆಪಿಯವ್ರು ಬಳಸಿದ್ದಾರೆ, ಇದರಲ್ಲಿ ಅವರು ಏನು ಸಾಧನೆ ಮಾಡಿದಂತಾಯ್ತು? ಎಂದರು.