ಮದುವೆಯಾಗುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿ ಮೇಲೆ ಚನ್ನೇಗೌಡನದೊಡ್ಡಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಇಬ್ಬರ ವಿರುದ್ದ ಮದ್ದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ರೂಪ ಎಸ್ ಎಂಬುವವರೇ ದೌರ್ಜನ್ಯಕ್ಕೆ ಒಳಗಾದವರು ಬೆಂಗಳೂರು ನಾಗಸಂದ್ರದ ಮಧುಚಂದ್ರ ಎಂಬ ಗೃಹ ರಕ್ಷಕ ದಳದ ಸಿಬ್ಬಂದಿ ಮದುವೆಯಾಗುವುದಾಗಿ ನಂಬಿಸಿ ಕಳೆದ ಜೂ.22ರಂದು ರೂಪ ಎಂಬುವವರ ಮನೆಯಲ್ಲೇ ಲೈಂಗಿಕ ದೌರ್ಜನ್ಯವೇಸಗಿ ದ್ರೋಹ ಮಾಡಿ ಹಾಗೂ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುತ್ತಾರೆ. ರಜಿನಿರಾಜ್ ಎಂಬ ಮಹಿಳೆ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಭಾನುವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ.