ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯ ಗೊಗ್ಗ ಗ್ರಾಮದ ಸರ್ವೇ ನಂಬರ್ 197ರ ಗೊಗ್ಗ ರಾಜ್ಯ ಅರಣ್ಯ ಪ್ರದೇಶದ ನೀಲಗಿರಿ ನಡುತೋಪಿನಲ್ಲಿ ಸುಮಾರು ಮೂರು ವರ್ಷ ವಯಸ್ಸಿನ ಗಂಡು ಚಿರತೆಯೊಂದು ಮೃತಪಟ್ಟಿದ್ದು ಈ ಕುರಿತಾದ ಮಾಹಿತಿ ಶುಕ್ರವಾರ ಲಭ್ಯವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಶಿಕಾರಿಪುರ ತಹಶೀಲ್ದಾರ್ ಶ್ರೀಮತಿ ಮಂಜುಳಾ ಶಂಕರ ಭಜಂತ್ರಿ ಹಾಗೂ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಿದ್ದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಎಂದು ಕಳುಹಿಸಲಾಗಿದೆ.ಈ ಸಂಬಂಧ ಗುರುವಾರ ಪ್ರಕರಣ ದಾಖಲಾಗಿದೆ.