ಮಳವಳ್ಳಿ : ಕಳೆದ ಮಂಗಳವಾರ ರಾತ್ರಿ ರಾಮಂದೂರು ಕೆರೆ ಬಳಿ ಕೊಲೆಯಾಗಿದ್ದ ಕಲ್ಕುಣಿ ಗ್ರಾಮದ ಮಂಜು ಎಂಬಾತನ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿ ಯಾಗಿರುವ ಕಿರುಗಾವಲು ಪೊಲೀಸರು ಕೊಲೆ ಕೃತ್ಯವೆಸಗಿದ್ದ ಆರೋಪದ ಮೇಲೆ ರಾಮನಾಥ ಮೋಳೆ ಗ್ರಾಮದ ವಾಸಿ ದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಗೀಡಾದ ಮಂಜು ತಮ್ಮ ಸಂಬಂಧಿಯೇ ಆದ ದರ್ಶನ್ ತಂಗಿಯನ್ನು ಪ್ರೀತಿಸಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರ ಮದುವೆಗೆ ಆರೋಪಿ ದರ್ಶನ್ ಸೇರಿದಂತೆ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸದರಿ ಯುವತಿಯನ್ನು ಕರೆತಂದು ಕಲ್ಕುಣಿ ಗ್ರಾಮದ ಅಜ್ಜಿ ಮನೆಯಲ್ಲಿ ಇರಿಸಿದ್ದ ಮಂಜು ಇನ್ನೂ ಒಂದು ತಿಂಗಳ ನಂತರ ಮದುವೆಯಾಗಲು ನಿರ್ಧರಿಸಿದ್ದ ಎನ್ನಲಾಗಿದೆ.