ಆಗಸ್ಟ್ 25, ಸೋಮವಾರ ಸಂಜೆ 6 ಗಂಟೆಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟ ವಿವಾದಕ್ಕೆ ಕಾರಣವಾಯಿತು.ಸತತ ಎರಡು ವರ್ಷಗಳಿಂದ TA,DA ವದಗಿಸಲಾಗದೇ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈ ಬಾರಿ ಕೂಡಾ ಸ್ಥಳೀಯ ದೈಹಿಕ ಶಿಕ್ಷಕರಿಗೆ ಯಾವುದೇ ಮಾಹಿತಿ ನೀಡದೇ ಕ್ರೀಡಾಕೂಟವನ್ನು ನಡೆಸಲು ಮುಂದಾದದ್ದು, ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿತು.ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಕರು ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗಬಾರದು ಎಂದು ಒತ್ತಾಯಿಸಿದರು