Download Now Banner

This browser does not support the video element.

ತುಮಕೂರು: ತುಮಕೂರು ದಸರಾ,ಸೆ.27ರಿಂದ ಅ.2ರವರೆಗೆ ಆಹಾರ ಮೇಳ : ನಗರದಲ್ಲಿ ಪಾಲಿಕೆ ಆಯುಕ್ತೆ ಅಶ್ವಿಜ

Tumakuru, Tumakuru | Sep 6, 2025
ತುಮಕೂರು ದಸರಾ ಮಹೋತ್ಸವ ಆಹಾರ ಮೇಳ ಉಪಸಮಿತಿಯು ಮೇಳವನ್ನು ಸೆ.27ರಿಂದ ಅ.2ರವರೆಗೆ 6 ದಿನಗಳ ಕಾಲ ನಡೆಸಲು ರೂಪು-ರೇಷೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಆಯುಕ್ತ ಬಿ.ವಿ.ಅಶ್ವಿಜ ಹೇಳಿದರು. ತುಮಕೂರು ನಗರದ ಮಹಾನಗರಪಾಲಿಕೆ ಸಭಾಂಗಣದಲ್ಲಿ ಮಹಾನಗರಪಾಲಿಕೆ ಆಯುಕ್ತರು ಹಾಗೂ ಆಹಾರ ಮತ್ತು ವಸತಿ ಸಮಿತಿ ಅಧ್ಯಕ್ಷರಾದ ಬಿ.ವಿ.ಅಶ್ವಿಜ ಅಧ್ಯಕ್ಷತೆಯಲ್ಲಿ ಆಹಾರ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು.ಶನಿವಾರ ಮಧ್ಯಾಹ್ನ ಸುಮಾರು 12 ರ ಸಮಯದಲ್ಲಿ ಈ ಸಭೆ ನಡೆಯಿತು.ಕಳೆದ ವರ್ಷದಿಂದ ಅದ್ದೂರಿಯಾಗಿ ಆರಂಭಗೊಂಡಿರುವ ತುಮಕೂರು ದಸರಾ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಭರದಿಂದ ನಡೆದಿದೆ.
Read More News
T & CPrivacy PolicyContact Us