ಹಿರಿಯ ಶಾಸಕ ಕೆ. ರಾಜಣ್ಣ ರವರು ನಮ್ಮ ಪಕ್ಷದಲ್ಲೇ ಇರಬೇಕು ಎಂದು ಹೇಳಿಕೆ ನೀಡುವ ಮೂಲಕ ಶಾಸಕ ಬಾಲಕೃಷ್ಣ ಯೂಟರ್ನ್ ಹೊಡೆದಿದ್ದಾರೆ. ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಅಂತ ಹೇಳಿ ಕಳೆದ ಎರಡು ದಿನಗಳ ಹಿಂದೆ ಹೊಸ ಬಾಂಬ್ ಸಿಡಿಸಿದ್ರು. ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾಲಕೃಷ್ಣ ಯೂಟರ್ನ್ ಹೊಡೆದಿದ್ದಾರೆ. ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಅವರು ಹಿರಿಯ ಶಾಸಕರು ನಮ್ಮ ಪಕ್ಷದಲ್ಲೇ ಇರಬೇಕು ಎಂದು ಹೇಳಿಕೆ ನೀಡಿದ್ದಾರೆ.