ಕಲಬುರಗಿ : ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದಾಗ ತೊಟ್ಟಿಲು ಕಾರ್ಯಕ್ರಮ ಏರ್ಪಡಿಸಿ ನಾಮಕರಣ ಮಾಡುತ್ತಾರೆ.. ಆದರೆ ಕಲಬುರಗಿ ನಗರ ಪೊಲೀಸ್ ಆಯುಕ್ತಲಾಯಕ್ಕೆ ನೂತನವಾಗಿ ಶ್ವಾನದಳ ಅಸ್ತಿತ್ವಕ್ಕೆ ತರಲಾಗಿದ್ದು, ನೂತನ ಶ್ವಾನದಳಕ್ಕೆ ಹೊಸದಾಗಿ ಬಂದ ಐದು ಶ್ವಾನ ಮರಿಗಳಿಗೆ ನಾಮಕರಣ ಮಾಡಲಾಗಿದೆ.. ಆ25 ರಂದು ಮಧ್ಯಾನ 12 ಗಂಟೆಗೆ ನಡೆದ ನಾಮಕರಣ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಅವರು, ಕ್ರೈಂ ವಿಭಾಗದ ಎರಡು ಶ್ವಾನಗಳಿಗೆ ರೀಟಾ, ರೂಬಿ, ಸ್ಟೋಟಕ ವಸ್ತುಗಳ ಪತ್ತೆ ಹಚ್ಚುವ ಎರಡು ಶ್ವಾನಗಳಿಗೆ ಸ್ಪಾರ್ಕಿ, ಸ್ಪೂರ್ತಿ ಮತ್ತು ಡ್ರಗ್ಸ್ ಪತ್ತೆ ಹಚ್ಚುವ ಶ್ವಾನಕ್ಕೆ ಲಿಯೋ ಎಂದು ಹೆಸರಿಡಲಾಗಿದೆ