ಮದ್ದೂರಿನಲ್ಲಿ ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಹಿಂದೂ ಸಂಘಟನೆ ಕೈವಾಡವಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ತುಮಕೂರು ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ತುಮಕೂರು ದಸರಾ ಲಾಂಛನವನ್ನು ಬಿಡುಗಡೆ ಮಾಡಿ ಬಳಿಕ ಮಾಧ್ಯಮಗೋಷ್ಠಿ, ಉದ್ದೇಶಿಸಿ ಸೋಮವಾರ ಮಧ್ಯಾಹ್ನ 1. 45ರ ಸಮಯದಲ್ಲಿ ಮಾತನಾಡಿದರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಸಂಬಂಧಿಸಿದಂತೆ 20 ಕ್ಕೂ ಅಧಿಕ ಮಂದಿ ಬಂಧನವಾಗಿದೆ. ಈ ವಿಚಾರವಾಗಿ ತನಿಖೆ ನಡೆಯುತ್ತಿದೆ. ಕಲ್ಲು ತೂರಾಟಕ್ಕೆ ಹಿಂದೂ ಸಂಘಟನೆ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ತನಿಖೆ ಬಳಿಕ ಸೂಕ್ತ ಮಾಹಿತಿ ಹೊರಬರಲಿದೆ ಎಂದರು.