ಚನ್ನಪಟ್ಟಣ ತಾಲೂಕಿನ ಅಕ್ಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಚನ್ನಪಟ್ಟಣ ರವರ ವತಿಯಿಂದ ಶುಕ್ರವಾರ ರೈತರಿಗೆ ಸುಮಾರು ಒಂದು ಕೋಟಿಗೂ ಅಧಿಕ ಕೆ ಸಿ ಸಿ ಬೆಳೆ ಸಾಲದ ಚೆಕ್ ಗಳನ್ನು ಸಂಘದ ಅಧ್ಯಕ್ಷರಾದ ಎಚ್ ಸಿ ಜಯಮುತ್ತು ವಿತರಣೆ ಮಾಡಿದರು. ಸಂಘದ ನಿರ್ದೇಶಕರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು ಹಾಗೂ ಮುಖಂಡರು ಫಲಾನುಭವಿಗಳು ಗ್ರಾಮಸ್ಥರು ಭಾಗವಹಿಸಿದರು.