ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ ಚಾಮರಾಜನಗರದ ಉಪ್ಪಾರ ಬಡಾವಣೆಯ ನಿವಾಸಿ ಹತ್ತು ವರ್ಷದ ಬಾಲಕ ಗೋಬಿಗಾಗಿ ಕಿಡ್ನಾಪ್ ಕಥೆ ಹೇಳಿದ. ನನ್ನನು ಕಿಡ್ನಾಒ್ ಮಾಡಿ ನಂತರ ಬಿಟ್ಟು ಬಿಟ್ಟು ಹೋದರು ಎಂದು ಬಾಲಕ ಪೋಷಕರ ಮುಂದೆ ಹೇಳಿದ ಈ ವೇಳೆ ಬಾಲಕನ ಮಾತು ಕೇಳಿ ತಂದೆ ಪಟ್ಟಣಕ್ಕೆ ದೂರು ನೀಡಿದರು. ನಮ್ಮ ಪೊಲೀಸರು ದೂರು ದಾಖಲು ಮಾಡಿಕೊಂಡು ಬಾಲಕ ಹೇಳಿದ ಎಲ್ಲಾ ಕಡೆ ಹೋಗಿ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಯಿತು. ಯಾವುದೇ ಸಾಕ್ಷ್ಯ ಸಿಗದೆ ಇರುವುದರಿಂದ ಬಾಲಕ ಹೇಳಿರುವುದು ಸುಳ್ಳು ಎಂದು ತಿಳಿದು ಬಂದಿದೆ. ಬಳಿಕ ಬಾಲಕ ಗೋವಿ ಕಥೆ ಬಗ್ಗೆ ಮಾಹಿತಿ ಬಿಚ್ಚಿಟ್ಟ ಎಂದು ಎಸ್ಪಿ ಕವಿತಾ ಅವರು ತಿಳಿಸಿದರು