Download Now Banner

This browser does not support the video element.

ಕಲಬುರಗಿ: ಅರಫತ್ ಕಾಲೋನಿಯಲ್ಲಿ ಮನೆಗಳ್ಳತನ, ನಗದು ಚಿನ್ನಾಭರಣ ಸಹಿತ ₹10.81 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ

Kalaburagi, Kalaburagi | Jun 7, 2025
ಕಲಬುರಗಿ : ಕಲಬುರಗಿ ನಗರದ ಅರಫತ್ ಕಾಲೋನಿಯಲ್ಲಿ ಮನೆಯೊಂದಕ್ಕೆ ಖದೀಮರು ಕನ್ನ ಹಾಕಿದ್ದು, ನಗದು, ಚಿನ್ನಾಭರಣ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ.. ಈ ಬಗ್ಗೆ ಜೂ7 ರಂದು ಮಧ್ಯಾನ 2.30 ಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.. ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಸೆಲ್ಸ್‌ ಮ್ಯಾನೇಜರ್ ಆಗಿರೋ ನನ್ನಸಾಬ್ ಎಂಬುವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಊರಿಗೆ ತೆರಳಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಮುರಿದು ಮನೆಯಲ್ಲಿದ್ದ ₹10 ಲಕ್ಷ ರೂ ನಗದು ಹಣ, ಚಿನ್ನಾಭರಣ ಸಹಿತ ₹10.81 ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us