ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದ ಕೆರೆಯ ಕೋಡಿ ಶಿಥಿಲಗೊಂಡಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ್ ನೇತ್ರತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಭಾನುವಾರ ಮಧ್ಯಾನ ಕೆರೆಯ ಬಳಿ ಜಮಾವಣೆಗೊಂಡ ನೂರಾರು ರೈತರು ಅಧಿಕಾರಿಗಳ ನಿರ್ಲಕ್ಷದಿಂದ ರೈತರು ತೊಂದರೆ ಪಡುವಂತಾಗಿದೆ ಕೂಡಲೇ ಸರ್ಕಾರ ಎಚ್ಚೆತ್ತು ಕೋಡಿ ದುರಸ್ತಿ ಮಾಡುವ ಮೂಲಕ ರೈತರಿಗೆ ಆಗಲಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ದುರಸ್ತಿಗೊಳಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಮುದ್ನಾಳ್ ಎಚ್ಚರಿಸಿದ್ದಾರೆ.