ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೋರ್ಟ್ ಹಾಲ್ ಕಚೇರಿಯಲ್ಲಿ ಇಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸುಂತೆ ಜೊತೆಗೆ ಸಂಚಾರಕ್ಕೆ ಬದಲಿ ರಸ್ತೆ ಗುರುತಿಸುವಂತೆ ಮತ್ತು ಉಚ್ಚಿಲ ಹಾಗೂ ಪಡುಬಿದ್ರಿ ಜಂಕ್ಷನ್ ಬಳಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಇದರ ತಡೆಗೆ ಬೀದಿ ದೀಪ ಮತ್ತು ಬ್ಯಾರಿಗೇಟ್ ಅಳವಡಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.