ಪ್ರವಾಸಿಗರನ್ನ ತೆಳೆಯಲು ಸಿಗಂದೂರು ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಚಿಸಿದೆ ಗುಜರಾತ್ ನ ಸಾಬರಮತಿ ನದಿಯಲ್ಲಿ ಈಗಾಗಲೇ ವಾಟರ್ ಯೆರೋಡ್ರೋಮ್ ಕಾರ್ಯಾಚರಿಸುತ್ತಿದೆ ಕರ್ನಾಟಕದ ಏಳು ಕಡೆ ಉಡ ಯೋಜನೆ ಅಡಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದ್ದು, ಉಡುಪಿಯ ಬೈಂದೂರು, ಸೂಪರ್ ಡ್ಯಾಮ್ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿಯ ಸೇತುವೆ ಸಮೀಪ, ಉಡುಪಿಯ ಮಲ್ಪೆ ಮಂಗಳೂರು ಮತ್ತು ಶಿವಮೊಗ್ಗದ ಸಿಗಂದೂರು ಸಮೀಪ ವಾಟರ್ ಏರೋಡ್ರೋಮ್ ಸ್ಥಾಪನೆಗೆ ಯೋಚಿಸಲಾಗಿದೆ ಎಂಬ ಮಾಹಿತಿ ಸೋಮವಾರ ಲಭ್ಯವಾಗಿದೆ.