ಹಾಸನ : ಮುಂದಿನ ಒಂದು ವರ್ಷದೊಳಗೆ ನಗರದ ಸೂಪರ್ ಸೆಷಾಲಿಟಿ ಆಸತ್ರೆ ರೋಗಿಗಳ ಸೇವೆ ಲಭ್ಯವಾಗಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಇಂದು ಆಸತ್ರೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು. 2018 ರಲ್ಲಿ ಸೂಪರ್ ಸ್ಪೆಷಾಲಿಟಿ ಕಾಮಗಾರಿ ಆರಂಭವಾಗಿ, 2022 ರಲ್ಲಿ ಅನುದಾನದ ಕೊರತೆಯಿಂದ ನಿಂತು ಹೋಗಿತ್ತು. ಇದಕ್ಕೆ ಬೇಕಿದ್ದ ಹೆಚ್ಚುವರಿ 9 ಕೋಟಿ ಅನುದಾನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಕಟ್ಟಡ ಅಪೂರ್ಣವಾಗಿತ್ತು. ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದರೂ ಹಣ ಬಿಡುಗಡೆಯಾಗಿರಲಿಲ್ಲ ಎ