ಮಳವಳ್ಳಿ : ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ 6ನೇ ಹಂತದ ಯೋಜನೆ ಗೆ ತೀವ್ರ ವಿರೋಧ ವ್ಯಕ್ತಪಡಿಸಿ ರುವ ಸಂಪೂರ್ಣ ಸಾವಯವ ಕೃಷಿ ಕರ ಸಂಘದ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ್ ಅವರು ಈ ಯೋಜನೆ ವಿ ಸಿ ನಾಲೆಯ ಕೊನೆ ಭಾಗವಾದ ಮಳವಳ್ಳಿ ಮದ್ದೂರು ತಾಲ್ಲೂಕಿನ ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಳವಳ್ಳಿ ಪಟ್ಟಣದ ಸಂಘದ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ 1.30ರ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಂಗಳೂರು ನಗರಕ್ಕೆ ತೊರೆ ಕಾಡನಹಳ್ಳಿ ಬಳಿಯಿಂದ 5 ಹಂತದ ಯೋಜನೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ 6ನೇ ಹಂತದ ಯೋಜನೆಗೂ ತೊರೆಕಾಡನಹಳ್ಳಿ ಅಥವಾ ಇನ್ನಿತರ ಕಡೆಯಿಂದ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರ ಇಲ್ಲ ಎಂದರು.