ಸ್ಪೀಕರ್ ಯು.ಟಿ ಖಾದರ್ ವಿರುದ್ದ ಸಭಾಪತಿ ಅಸಮಾಧಾನ ಹಿನ್ನೆಲೆ ಬುಧವಾರ ಮಧ್ಯಾಹ್ನ 1:40 ರ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಸಭಾಪತಿ ಹೊರಟ್ಟಿ ಅವರ ಭೇಟಿಗೆ ಸ್ಪೀಕರ್ ಯುಟಿ ಖಾದರ್ ಆಗಮಿಸಿದರು. ಹೊರಟ್ಟಿಯವರನ್ನು ಸಮಾಧಾನಪಡಿಸಲು ತಾವೇ ಖುದ್ದು ಆಗಮಿಸಿದ್ದು, ಚರ್ಚೆ ನಡೆಸಿದ್ದರು. ಸಭಾಪತಿ ಹೊರಟ್ಟಿ ಅವರು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಏಕ ಪಕ್ಷೀಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆಕ್ಷೇಪ ಅಸಮಾಧಾನ ಹೊರಹಾಕಿದ್ದ ಹಿನ್ನೆಲೆ ಹೊರಟ್ಟಿ ಅವರನ್ನ ಯು.ಟಿ ಖಾದರ್ ಅವರು ಭೇಟಿ ಮಾಡಿದ್ದು ಸಮಾಲೋಚನೆ ನಡೆಸಿದ್ದಾರೆ.