ಭಾಲ್ಕಿ: ಈದ್ ಮಿಲಾದ್ ಉನ್ ನಬಿ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಮಿಲಾದ್ ಕಮಿಟಿಯಿಂದ ಭಾಲ್ಕಿಕರ್ ಆಸ್ಪತ್ರೆಯಲ್ಲಿ ಮತ್ತು ಎಂಐಎಂ ಪಕ್ಷದಿಂದ ಜಾಧವ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಿಲಾದ ಕಮಿಟಿ ಅಧ್ಯಕ್ಷ ಎಂ.ಡಿ ಅಬ್ರಾರ್, ಎಂಐಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಡಿ ರಫೀಕ್ ಇನಾಮ್ದಾರ, ಸಾಮಾಜಿಕ ಕಾರ್ಯಕರ್ತ ನಸಿರಸಾಬ್, ಬೀದರ್ ಹಾಗೂ ಉದಗೀರನ ಬ್ಲಡ್ ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.