ಕನ್ನಡ ಶಿಕ್ಷಕರಿಗಾಗಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹೊಸನಗರದ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ನಡೆದಿದೆ. ಹೆಚ್ಚುವರಿ ಹುದ್ದೆ ಎಂದು ಶಿಕ್ಷಕರ ವರ್ಗಾವಣೆ ಮಾಡದಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಕೆಪಿಎಸ್ ಹಾಗೂ ಬಹುಭಾಷಾ ಶಾಲೆಗಳ ನಡುವಿನ ತಾರತಮ್ಯ ಸರಿಪಡಿಸಿ. ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಅಲ್ಲದೆ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆಯಲು ಬಾರದ ಉರ್ದು ಶಿಕ್ಷಕರ ಬಳಿ ಪಾಠ ಮಾಡಲು ಹೇಳುತ್ತಿದ್ದಾರೆ. ಅದರಿಂದ ನಮ್ಮ ಭವಿಷ್ಯ ಹಾಳಾಗುತ್ತದೆ. ಮೊಟ್ಟೆ,ಬಾಳೆಹಣ್ಣು ಕೊಟ್ಟಿದ್ದು ಸಾಕು ಶಿಕ್ಷಕರನ್ನು ಕೊಡಿ ಎಂದು ವಿದ್ಯಾರ್ಥಿಗಳು ಮನವಿಯನ್ನ ಮಾಡಿದ್ದಾರೆ.