ಮಳವಳ್ಳಿ : ತಾಲ್ಲೂಕಿನ ಹಲಗೂರು ಹೋಬಳಿ ಹೆಚ್ ಬಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಏರ್ಪಾಡಾಗಿದ್ದ ಚುನಾವಣೆಯಲ್ಲಿ ಎಲ್ಲಾ 11 ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಈ ಸಹಕಾರ ಸಂಘದ 11 ಮಂದಿ ನಿರ್ಧೇಶಕರ ಆಯ್ಕೆಗಾಗಿ ಚುನಾ ವಣೆ ನಿಗಧಿಯಾಗಿದ್ದು ನಾಮಪತ್ರ ಸಲ್ಲಿಕೆ ಬುಧವಾರ ಕಡೇ ದಿನವಾಗಿದ್ದು ನಾಮಪತ್ರ ಹಿಂಪಡೆಯಲು ಶುಕ್ರವಾರ ಕಡೇ ದಿನವಾಗಿದ್ದು 11 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿಯು ವುದರೊಂದಿಗೆ ಇವರ ಆಯ್ಕೆ ಅಂತಿಮವಾಗಿದ್ದು ಘೋಷಣೆ ಯಷ್ಟೇ ಬಾಕಿ ಉಳಿದಿದೆ. ಶುಕ್ರವಾರ ಸಾಯಂಕಾಲ 5 ,30 ರ ಸಮಯದಲ್ಲಿ ಆಯ್ಕೆಯಾದ ಎಲ್ಲಾ ನಿರ್ಧೇಶಕರಿಗೆ ಗ್ರಾಮಸ್ಥರು ಹಾರ ತುರಾಯಿಗಳೊಂದಿಗೆ ಅಭಿನಂದಿ ಸಿದರು