ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಿಂದೂಗಳ ಹಬ್ಬ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ಇಲ್ಲಿನ ಶಾಸಕರು ಸದನದಲ್ಲಿ ವಿಚಾರ ಎತ್ತುತ್ತಾರೆ. ನಾನು ಸ್ಪಷ್ಟನೆ ಹೇಳಲು ಬಯಸುತ್ತೇನೆ, ಬಿಜೆಪಿ ಬಂಡವಾಳವೇ ಧರ್ಮದ ವಿಚಾರದಲ್ಲಿ ಅಡಚಣೆ ಮಾಡುವುದಾಗಿದ್ದು, ಅದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಯಾಕೆಂದರೆ ಇಲ್ಲಿ ಯಾವುದೇ ಧರ್ಮದ ಹಬ್ಬಗಳ ಆಚರಣೆಗೆ ಎಲ್ಲಿಯೂ ಯಾವ ರೀತಿಯ ತೊಂದರೆ ಇಲ್ಲ. ಆಯೋಜಕರು ಶ್ರದ್ಧಾಭಕ್ತಿಪೂರ್ವಕವಾಗಿ ವೈಭವೋಪೇತ ಹಬ್ಬಗಳನ್ನು ಆಚರಿಸಿದರೆ ರಾಜ್ಯ ಸರ್ಕಾರದಿಂದ ಯಾವುದೇ ಅಡಚಣೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಆರ್ ಪದ್ಮರಾಜ್ ಹೇಳಿದರು.