ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆ ಮೇಲೆ ದಾಳಿ ಶುಕ್ರವಾರ ರಾತ್ರಿ 1 ಗಂಟೆಗೆ ಕ್ಕೆ ಶೋಧ ಕಾರ್ಯ ಅಂತ್ಯವಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡಿ, ಇಡಿ ಅಧಿಕಾರಿಗಳು ವಾಪಸ್ ಹೊರಟಿದ್ದಾರೆ. ಬೆಂಗಳೂರಿನತ್ತ ಹೊರಟ ಇಡಿ ಅಧಿಕಾರಿಗಳು, 20 ಕ್ಕೂ ಹೆಚ್ಚು ಇನ್ನೋವಾ ಕಾರುಗಳಲ್ಲಿ ದಾಳಿ ಮುಕ್ತಾಯ ಮಾಡಿ ತೆರಳಿದ್ದಾರೆ. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿದ್ದು, ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನ ಪಡೆದು ಬೆಂಗಳೂರಿಗೆ ಇಡಿ ಟೀಂ ಹಿಂತಿರುಗಿದೆ. ಡೆಪ್ಯುಟಿ ಡೈರೆಕ್ಟರ್ ರಚಿಶ್ ನೇತೃತ್ವದಲ್ಲಿ ನಡೆದಿದ್ದ ಇಡಿ ದಾಳಿ ಮಾಡಿತ್ತು, ಅಪಾರ ಪ್ರಮಾಣದ ಆಸ್ತಿ ಪತ್ರ ಪಡೆದು ವಾಪಸ್ ತೆರಳಿದ್ದಾರೆ.