ಜೋಯಿಡಾ : ಜೋಯಿಡಾ ತಾಲೂಕಿನ ಅನ್ಮೋಡಾ ತನಿಖಾ ಠಾಣೆಯ ಬಳಿ ಗೋವಾದಿಂದ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಟೊಯೊಟಾ ಕಂಪೆನಿಯ ಕಾರು ಸಹಿತ ಮದ್ಯವನ್ನು ಅನ್ಮೋಡಾ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆಯ ಬಗ್ಗೆ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಅಬಕಾರಿ ಇಲಾಖೆಯಿಂದ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಗದಗ ತಾಲೂಕಿನ ಹತ್ಲಗಿರಿ ರಸ್ತೆಯ ಹಮಾಲ ಪ್ಲಾಟ್ ನಿವಾಸಿ ಕಾರ್ತಿಕ ವೀರಯ್ಯ ಹಿರೇಮಠ ಎಂಬಾತನು KA 05 AG 9984 ಸಂಖ್ಯೆಯ ಟೊಯೊಟಾ ಕಂಪನಿಯ ಕಾರಿನಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯವನ್ನು ಸಾಗಾಟ ಮಾಡುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.