*ಬರದ ಸೀಮೆಯಲೊಬ್ಬ ಅಪ್ಪಟ ಕೃಷಿ ಸಂತ* ಮೊಳಕಾಲ್ಮುರು:-ಇವರೊಬ್ಬ ಅಪ್ಪಟ ಕೃಷಿ ಯೋಗಿ. ರಾಜ್ಯಮಟ್ಟದ ಪ್ರಶಸ್ತಿಗಳ (Award) ಜತೆ ಕೇಂದ್ರ ಸರಕಾರದಿಂದ ಕೃಷಿ ಪಂಡಿತ ಪ್ರಶಸ್ತಿ ಪಡೆದುಕೊಂಡ ಕೃಷಿ ಸಂತ. ನೀರು, ಮಣ್ಣಿನ ಬಳಕೆ,ಆಧುನಿಕ ತಂತ್ರಜ್ಞಾನ ಅಳವಡಿಕೆ, ಗೊಬ್ಬರ ಉತ್ಪಾದನೆ, ಹೀಗೆ ಪ್ರತಿ ಒಂದರಲ್ಲಿ ಯಶಸ್ಸು (Success) ಕಂಡಿರುವ ಬಯಲು ಸೀಮೆಯ ಅಪರೂಪದ ಕೃಷಿ ತಜ್ಞ (Agriculturist) ಎಸ್.ಸಿ. ವೀರಭದ್ರಪ್ಪ. ಇವರು ಚಿತ್ರದುರ್ಗ (Chitradurga) ಜಿಲ್ಲೆಯ ಕರ್ನಾಟಕ ಗಡಿ ಭಾಗದಲ್ಲಿನ ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿರುವ 83ಎಕರೆಯ ವಸುಂಧರ ಕೃಷಿ ಫಾರಂನ ಒಡೆಯ.83 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಈ ಕೃಷಿಕ್ಷೇತ್ರ.