ತಂತ್ರಜ್ಞಾನದ ಪ್ರಗತಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಆಧುನಿಕ ಆವಿಷ್ಕಾರವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇದರ ಸದ್ಬಳಕೆ ಆಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ. ಬೆಂಗಳೂರು ರಾಜಾಜಿನಗರದ ಆರ್.ಪಿ.ಎ. ಪ್ರಥಮದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆಯೋಜಿಸಲಾಗಿದ್ದ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ -ಅನ್ವಯಿಕೆಗಳು ಮತ್ತು ಪರಿಣಾಮಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಧಾಟಿಸಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಕೃತಕ ಬುದ್ಧಿಮತ್ತೆ ಮತ್ತು 'ಯಂತ್ರ ಕಲಿಕೆ (ಮಿಷನ್ ಲರ್ನಿಂಗ್) ಭವಿಷ್ಯದ ಅಗತ್ಯವಾಗಿದ್ದು, ಪ್ರೌಢ ಶಾಲಾ ಶಿಕ್ಷಣದಲ್ಲೇ ಇದರ ಅಳವಡಿಕೆ ಮಕ್ಕಳ ಜ್ಞಾನವರ್ಧನೆಗೆ ಇಂಬು ನೀಡು