ಹಾಕಿ ಕ್ಷೇತ್ರದಲ್ಲಿ ಭಾರತ ದೇಶವಲ್ಲದೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಮಹಾನ್ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್ ಅವರು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಬಣ್ಣಿಸಿದರು. ಅವರು ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೇರಾ ಯುವ ಭಾರತ್ ಇವರ ಸಂಯುಕ್ತಾಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ರವರ ಜನ್ಮದಿನದ ಅಂಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ದಿನದಂದು ಕ್ರೀಡೆಯಲ್ಲಿ ಅಪರಾವದಂತಹ ಸಾಧನೆಗೈದ ಸಾಧಕರನ್ನು ಸ್ಮರಿಸುವುದರ ಜತೆಗೆ ಕ್ರೀಡಾ ಮೌಲ್ಯಗಳನ್ನು ಹಾಗೂ ಕ್ರೀಡಾ ಮನೋಭಾವನೆಯನ್ನು ಬದುಕಿನಲ್ಲಿ ಅಳವಡಿಸಕೊಳ್ಳಿ ಎಂದರು.