ಪಟ್ಟಣದಲ್ಲಿ ಸ್ವಂತ ಮನೆ ಹಾಗೂ ಜಾಗ ಇಲ್ಲದೆ ನಿರ್ಗತಿಕರಾಗಿ ವಾಸ ಮಾಡುವ ನಿವೇಶನ ರಹಿತರಿಗೆ ಪಟ್ಟಣದಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಜಾಗವನ್ನು ನಿವೇಶನ ಮಾಡಿ ನಿರ್ಗತಿಕರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಎಂ.ಡಿ ಬಾಬಾ ನೇತೃತ್ವದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ ಅವರಿಗೆ ಆಗಸ್ಟ್ 22 ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಗರದ ಬಸವೇಶ್ವರ ವೃತ್ತದಿಂದ ಸಚಿವ ಎನ್ ಎಸ್ ಬೋಸರಾಜು ಕಚೇರಿವರೆಗೆ ಪಾದಯಾತ್ರೆ ಮಾಡಿದರು. ಸರ್ವೆ ನಂ.631 ರಲ್ಲಿ 5.37 ಎಕರೆ ಭೂಮಿಯಿದ್ದು ಆ ಭೂಮಿಯನ್ನು ನಿರ್ಗತಿಕರಿಗೆ ನಿವೇಶನವಾಗಿ ನೀಡಲು ಒತ್ತಾಯಿಸಿದರು.