ಹನೂರು: ತಾಲೂಕಿನ ಪ್ರಸಿದ್ದ ಧಾರ್ಮಿಕಯಾತ್ರಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸ್ವರ್ಣಗೌರಿ ವ್ರತದಂದು ಗೌರಿ ಮೂರ್ತಿಯನ್ನು ಪ್ರತಿ ಷ್ಠಾಪಿಸಲಾಯಿತು ಮುಂದಿನ 5 ದಿನಗಳ ಕಾಲ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದಂತಹ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಗೌರಿ ಹಬ್ಬದ ದಿನ ಮ.ಬೆಟ್ಟದ ಅಂತರಗಂಗೆಯ ಗೌರಿ ಹೊಂಡದಲ್ಲಿ ನೀರು ಜಿನುಗುವುದು ಇಲ್ಲಿನ ಮತ್ತೊಂದು ವಿಶೇಷ. ಹಾಗಾಗಿ ಬೇಡಗಂಪಣ ಅರ್ಚಕರು ಉಪವಾಸವಿದ್ದು, ಪ್ರತಿ ವರ್ಷ ಗೌರಿ ಹಬ್ಬದ ದಿನದಂದು ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಶ್ರೀಗಳ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.