ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಭಾರಿ ಪ್ರಮಾಣವಾದ ಚಿನ್ನದ ನಿಕ್ಷೇಪ ಇದೆ ಎಂಬುದಾಗಿ ವರದಿಯಾಗಿದ್ದು. ಆರಮ್ ಕಂಪನಿಗಳು ಚಿನ್ನದ ನಿಕ್ಷೇಪ ಶೋಧನೆಗೆ ಅನುಮತಿ ಕೇಳಿರುವುದಾಗಿ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಹೇಳಲಾಗುತ್ತಿದ್ದು 5,000ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸೇರಿದೆ ಎನ್ನಲಾಗುತ್ತಿದೆ.