ಚಿಕ್ಕಬಳ್ಳಾಪುರ ನಗರದಲ್ಲಿ ವಿವಿಧ ಗಣಪತಿ ಮೂರ್ತಿಗಳ ಪ್ರತಿಷ್ಠಾಪನಾ ಪೆಂಡಾಲ್ ಗಳಿಗೆ ಸಂಸದ ಡಾ. ಕೆ ಸುಧಾಕರ್ ಅವರ ಪತ್ನಿ ಪ್ರೀತಿ ಸುಧಾಕರ್, ಸಂಸದರ ಪರವಾಗಿ ಭೇಟಿ ನೀಡಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಪ್ರತಿ ವರ್ಷದಂತೆ ಸಂಸದ ಡಾ.ಕೆ ಸುಧಾಕರ್ ರವರು ಪ್ರತಿವರ್ಷದಂತೆ 600ಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೆ ಸಹಾಯ ಮಾಡುತ್ತಿದ್ದರು. ಹಾಗೆಯೇ ಬಾಗಿನವನ್ನು ಕೂಡ ಅರ್ಪಿಸುತ್ತಿದ್ದರು. ಇದರ ಭಾಗವಾಗಿ ಸಂಸದರು ವಿದೇಶಗಳಲ್ಲಿ ಇರುವ ಕಾರಣ , ಅವರ ಪರವಾಗಿ ಅವರ ಪತ್ನಿ ಅವರು ಭೇಟಿ ನೀಡಿ ಶುಭ ಕೋರಿದ್ದಾರೆ. ಈ ವೇಳೆ ನಗರಸಭೆ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ನಾಗರಾಜ್ ಮತ್ತಿತರು ಸಾತ್ ನೀಡಿದರು.