ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧಾರವಾಡ ನಗರದಾದ್ಯಂತ ಮುಸಲ್ಮಾನ ಸಮುದಾಯದ ಜನರು ಬೃಹತ್ ಮೆರವಣಿಗೆ ನಡೆಸಿದರು. ಶುಕ್ರವಾರ ಸಂಜೆ 5 ಗಂಟೆಗೆ ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಹ್ಮದ್ ಪೈಗಂಬರ್ ಜನ್ಮದಿನ ಸಂದೇಶವನ್ನು ಸಾರಿದರು. ಇನ್ನೂ ನಗರದಾದ್ಯಂತ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಮುಸಲ್ಮಾನ ಸಮುದಾಯದ ಜನರು ಆಚರಣೆ ಮಾಡಿದರು.