ಕಾರವಾರ ತಾಲೂಕಿನ ಕೈಗಾ-ಬಾರೆ ರಸ್ತೆಯಲ್ಲಿ ಹುಲಿ ಪ್ರತ್ತಕ್ಷವಾಗಿದೆ. ಹುಲಿ ಶನಿವಾರ ಬೆಳಗ್ಗೆ 11.30 ಸುಮಾರು ನಡೆದುಕೊಂಡು ಹೋಗಿರುವುದು, ಇದೇ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗಿದೆ. ರರಾಜ್ಯ ಹೆದ್ದಾರಿಯಲ್ಲಿ ಹುಲಿ ರಾಜಾರೋಷವಾಗಿ ನಡೆದುಕೊಂಡು ಹೋಗಿದ್ದು ರಸ್ತೆ ಸಂಚಾರಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.