ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದೇಹದಾರ್ಢ್ಯ ಪಟು ಸುರೇಶ್ ಬಾಬು ರವರ ಪ್ರಾರ್ಥೀವ ಶರೀರವನ್ನು ಕೋಲಾರಕ್ಕೆ ದಿನಾಂಕ - 07-09-2025 ರ ಭಾನುವಾರದಂದು ತರಲಿದ್ದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಅಂದೇ ಸುರೇಶ್ ಬಾಬು ರವರ ಅಂತ್ಯಕ್ರಿಯೆ ಗಾಂಧಿನಗರದ ಸ್ಮಶಾನದಲ್ಲಿ ನಡೆಯಲಿದೆಯೆಂದು ಕುಟುಂಬದವರು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.