ಗುರುಮಠಕಲ್: ತಾಲೂಕಿನ ಗಾಜರಕೋಟ ಗ್ರಾಮದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿತ್ತಾಪುರ ಘಟಕದಲ್ಲಿ ಬಸ್ ರಸ್ತೆಯಿಂದ ಕೆಳಗೆ ಇಳಿದು ಅದೃಷ್ಟವಷಾತ್ ದೊಡ್ಡ ಆವಾಂತರ ತಪ್ಪಿದೆ. ಗುರುಮಠಕಲ್ ಪಟ್ಟಣದಿಂದ ಬೆಳಿಗ್ಗೆ ಕಲಬುರಗಿಗೆ ಸಂಚರಿಸುವ ಕೆಎ32 ಎಫ್ 2079 ವಾಹನ ಇದಾಗಿದ್ದು, ಎಂದಿನಂತೆ ಬಸ್ ಬೆಳಿಗ್ಗೆ ಗುರುಮಠಕಲ್ ಬಸ್ ನಿಲ್ದಾಣದಿಂದ ಹೊರಡಿ ಮಾರ್ಗ ಮಧ್ಯೆ ಗಾಜರಕೋಟ ಹೊರವಲಯದಲ್ಲಿ ರಸ್ತೆ ಪಕ್ಕ ತಿಪ್ಪೆಗೆ ಇಳಿದಿದೆ. ಬಸ್‌ನಲ್ಲಿ ಬೆರಳೆಣಿಗೆ ಪಯಾಣಿಕರು ಪಯಾಣಿಸುತ್ತಿದ್ದರು. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬಸ್ ಬಲಭಾಗ ಜಖಂ ಆಗಿದೆ.