ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲೊಂದು ವಿಶಿಷ್ಟವಾದ ಶ್ವಾನವಿದೆ. ಶಾಂತಾಬಾಯಿ ಕೋಳಿ ಎಂಬುವರ ಮನೆಯಲ್ಲಿ ವಿಶೇಷ ಶ್ವಾನವಿದ್ದು ಮನೆ ಮುಂದೆ ಕಟ್ಟಿರೋ ಎಮ್ಮೆಗಳನ್ನು ಮೇಯಿಸಲೆಂದು ಬಿಡಲು ಮುಂದಾದರೆ ಸಾಕು. ತನ್ನಿಂದ ತಾನೇ ಎಮ್ಮೆ ಹಿಂಬಾಲಿಸಿ ಹೋಗಿ ಅವುಗಳ ರಕ್ಷಕನಂತೆ ನಿಂತು ಮೇಯಿಸಿಕೊಂಡು ಬರುತ್ತೆ. ಈ ಶ್ವಾನ ಸಣ್ಣ ಮರಿಯಿದ್ದಾಗ ಶಾಂತಾಬಾಯಿ ಕೋಳಿ ಅವರ ಮನೆಗೆ ಬಂದಿದೆ. ಆಗ ಶಾಂತಾಬಾಯಿ ಕೋಳಿ ಚಿಕ್ಕ ಶ್ವಾನಕ್ಕೆ ಹಾಲು