ಆಟೊ ಟಚ್ ಆಯ್ತು ಎಂಬ ಆರೋಪಿಸಿ ಯುವತಿಯು ನಡುರಸ್ತೆಯಲ್ಲಿ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮೇ 31ರಂದು ಸಂಜೆ 5 ಗಂಟೆ ಸುಮಾರಿಗೆ ಬೆಳ್ಳಂದೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಆಟೊ ಚಾಲಕ ಲೊಕೇಶ್ ನೀಡಿದ ದೂರಿನನ್ವಯ ಅಪರಿಚಿತ ಯುವತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ಧಾರೆ. ಬೆಳ್ಳಂದೂರು ಬಿಬಿಎಂಪಿ ಕಚೇರಿ ಬಳಿ ಆಟೊದಲ್ಲಿ ಬರುವಾಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅನ್ಯ ರಾಜ್ಯದ ಯುವತಿಯು ತನ್ನ ಕಾಲಿಗೆ ಆಟೊ ಟಚ್ ಆಗಿದೆ ಎಂದು ಭಾವಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ತಿಳಿ ಹೇಳಿದರೂ ಏರುಧ್ವನಿಯಲ್ಲಿ ಮಾತನಾಡಿ ಏಕಾಏಕಿ ಚಪ್ಪಲಿಯಿಂದ ತನ್ನ ಮುಖಕ್ಕೆ ಹೊಡೆದಿದ್ದಾಳೆ ಎಂದು ದೂರಿನಲ್ಲಿ ಲೊಕೇಶ್ ಆರೋಪಿಸಿದ್ದಾರೆ.